ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಗಣಿ ಪರಿಸರ ಪುನ:ಶ್ಚೇತನ ನಿಗಮ

       ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ  ಗಣಿಗಾರಿಕೆ ಬಗ್ಗೆ ದಾಖಲಾಗಿರುವ ಕೇಸುಗಳಿಗೆ ಸಂಬಂಧಿಸಿದಂತೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯ ಪ್ರಭಾವಕ್ಕೊಳಗಾದ ವಲಯಗಳ ಸುಧಾರಣೆ ಹಾಗೂ ಪುನರ್ವಸತಿಗಾಗಿ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ [Comprehensive Environment Plan for Mining Impact Zone (CEPMIZ)]’’  ಎಂಬ ಯೋಜನೆಯನ್ನು ಹತ್ತು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅನುಷ್ಟಾನಗೊಳಿಸಲು ಒಂದು ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು. ಮೇಲಿನ CEPMIZ ಯೋಜನೆಯನ್ನು ಅನುಷ್ಟಾನಗೊಳಿಸಲು ವಿಶೇಷ ಉದ್ದೇಶಗಳ ಸಂಸ್ಥೆಯೊಂದನ್ನು (SPV), ಸ್ಥಾಪಿಸಬೇಕೆಂದು ಮಾನ್ಯ ಸರ್ವೋಚ್ಚ ನ್ಯಾಯಾಲ ಆದೇಶಿಸಿದ್ದು, ಅದರಂತೆ, ರಾಜ್ಯ ಸರ್ಕಾರ ದಿನಾಂಕ ೨೧.೦೬.೨೦೧೪ ರ ಆದೇಶದಲ್ಲಿ ಕರ್ನಾಟಕ ಗಣಿ ಪರಿಸರ ಪುನ:ಶ್ಚೇತನ ನಿಗಮವನ್ನು (ಕೆ.ಎಂ.ಇ.ಆರ್.ಸಿ) ಸ್ಥಾಪಿಸಲು ಅನುಮೋದನೆ ನೀಡಿದ್ದ್ದು, ಕಂಪನಿ ಕಾಯ್ದೆ ೨೦೧೩ರ ಕಂಡಿಕೆ ೮ ರ ಅಡಿಯಲ್ಲಿ ಲಾಭಾಪೇಕ್ಷೇರಹಿತ ನಿಗಮ (non-profitable company) ವಾಗಿ ದಿನಾಂಕ ೩೦-೦೬-೨೦೧೪ರಂದು ನೋಂದಾಯಿಸಲಾಗಿದೆ.
ಗಣಿಭಾದಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಗೆ ಪೂರಕವಾದ ಅರಣ್ಯ ಅಭಿವೃಧಿ, ಪರಿಸರ ಪುನ:ಶ್ಚೇತನ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ನೀರಾವರಿ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಗ್ರಾಮೀಣ ರಸ್ತೆಗಳು, ಆರೋಗ್ಯ, ಶಿಕ್ಷಣ, ದುರ್ಬಲ ವರ್ಗಗಳ ಅಭಿವೃದ್ಧಿ, ವಸತಿ, ಕೌಶಲ್ಯ ಅಭಿವೃದ್ದಿ, ಪ್ರವಾಸೋದ್ಯಮ, ಮುಂತಾದ ಶೀರ್ಷಿಕೆಗಳಡಿ ಸಮಗ್ರವಾದ ಯೋಜನೆಯನ್ನು ರೂಪಿಸುವುದು, ಸಮಗ್ರ ಗಣಿಗಾರಿಕೆಗೆ ಅವಶ್ಯವಿರುವ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಸೈಡಿಂಗ್ ಮತ್ತು ರೈಲ್ವೆ ಸಬ್ ಲೈನ್‌ಗಳನ್ನು ಸ್ಥಾಪಿಸುವುದು ಹಾಗೂ ಗಣಿ ಗುತ್ತಿಗೆದಾರರು ಕನ್ವೆಯರ್ ಬೆಲ್ಟ್ ಸಿಸ್ಟಂ ಅಳವಡಿಸುವುದು, ಮುಂತಾದ ಎಲ್ಲಾ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಟಾನ ಗೊಳಿಸುವುದು/ಅನುಷ್ಟಾನದ ಮೇಲುಸ್ತುವಾರಿ ವಹಿಸುವುದು ನಿಗಮದ ಮುಖ್ಯ ಉದ್ದೇಶವಾಗಿದೆ.
ಸರ್ವೋಚ್ಚ ನ್ಯಾಯಾಲಯವು ದಿನಾಂಕ ೨೧.೦೩.೨೦೧೮ರ ಆದೇಶದಲ್ಲಿ ಬಳ್ಳಾರಿ, ಚಿತ್ರದುರ್ಗ, ಮತ್ತು ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಪುನ:ಶ್ಚೇತನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನೊಳಗೊಂಡ (all-inclusive and comprehensive) ಪರಿಷ್ಕೃತ CEPMIZ ನ ಪ್ರಸ್ತಾವನೆಯನ್ನು ಕೆ.ಎಂ.ಇ.ಆರ್.ಸಿ.ಯು ಸಲ್ಲಿಸುವಂತೆ ಆದೇಶಿಸಿರುತ್ತದೆ. ನ್ಯಾಯಾಲಯದ ಸದರಿ ಅದೇಶದಲ್ಲಿ ಕೇಂದ್ರ ಅಧಿಕಾರಯುಕ್ತ ಸಮಿತಿ (Central Empowered Committee)   ಪ್ರಸ್ತಾವನೆಯನ್ನು ಕೆ.ಎಂ.ಇ.ಆರ್.ಸಿ.ಯು ಸಲ್ಲಿಸುವಂತೆ ಆದೇಶಿಸಿರುತ್ತದೆ. ನ್ಯಾಯಾಲಯದ ಸದರಿ ಅದೇಶದಲ್ಲಿ ಮೇಲ್ವಿಚಾರಣಾ ಸಮಿತಿ Federation of Indian Mineral Industries(FIMI) ಸಂಸ್ಥೆ ನೀಡಿರುವ ಸಲಹೆಗಳನ್ನು ಪರಿಶೀಲಿಸಲು ಹಾಗೂ ವ್ಯವಸ್ಥಿತ ಗಣಿಗಾರಿಕೆಗೆ ಪೂರಕವಾಗುವಂತೆ ಮತ್ತು ಗಣಿಭಾದಿತ ವಲಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುವಂತೆ ಅವಶ್ಯವಿರುವ ರಸ್ತೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಪ್ರಸ್ತಾವನೆ; ಮತ್ತು ಮೂರು ಜಿಲ್ಲೆಗಳ ಖನಿಜವಿರುವ ಎಲ್ಲಾ ಪ್ರದೇಶಗಳನ್ನು ಸಂಪರ್ಕಿಸಲು ರೈಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಬಂಧ ವಿವರವಾದ ಅಧ್ಯಯನ ನಡೆಸಿ ಅನುಷ್ಟಾನಕ್ಕೆ ಅವಶ್ಯವಿರುವ ಹಣಕಾಸು ಮತ್ತು ಇತರ ವಿವರಗಳನ್ನೊಳಗೊಂಡ ವರದಿಯನ್ನು ಸಲ್ಲಿಸಲು ಸೂಚಿಸಿತ್ತು. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲಿನ ಆದೇಶದನ್ವಯ ಸಾಮಾಜಿಕ, ಮತ್ತು ಆರ್ಥಿಕ ಅಭಿವೃದ್ಧಿ, ಅರಣ್ಯ ಅಭಿವೃದ್ದಿ, ಪರಿಸರ ಪುನರ್‌ಸ್ಥಾಪನೆ ಮತ್ತು  ವ್ಯವಸ್ಥಿತ ಗಣಿಗಾರಿಕೆ  ಚಟುವಟಿಕೆಗಳನ್ನು ಬೆಂಬಲಿಸಲು ಮೇಲಿನ ಮೂರು  ಜಿಲ್ಲೆಗಳ  ಖನಿಜ  ಪ್ರದೇಶಗಳನ್ನು  ಸಂಪರ್ಕಿಸಲು ರೈಲು ಸಾರಿಗೆಗೆ ಸಂಬಂಧಿಸಿದ ವಿವರಗಳನ್ನೊಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಸ್ಥಳೀಯ ಇಲಾಖೆಗಳ ಅಧಿಕಾರಿಗಳು ಮತ್ತು FIMI ಸದಸ್ಯರುಗಳೊಂದಿಗೆ ಸಭೆಗಳನ್ನು ನಡೆಸಿ ಗಣಿ ಭಾದಿತ ಪ್ರದೇಶಗಳಿಗೆ ಅವಶ್ಯವಿರುವ ಯೋಜನೆಗಳನ್ನೊಳಗೊಂಡ ವರದಿಯನ್ನು ತಯಾರಿಸಿದ್ದು, ಸದರಿ ವರದಿಯನ್ನು ಸರ್ಕಾರದ ಅನುಮೊದನೆಯೊಂದಿಗೆ ಅಕ್ಟೊಬರ್ ೨೦೧೮ ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ರೈಲ್ವೆ ಸೈಡಿಂಗ್ ಮತ್ತು ರೈಲ್ವೆ ಸಬ್ ಲೈನ್‌ಗಳನ್ನು ಸ್ಥಾಪಿಸುವ ವಿಸ್ತ್ರತ ವರದಿಯನ್ನು ಮತ್ತು ರೈಲ್ವೆ ಮೂಲಭೂತ ಸೌಕರ್ಯಗಳ ಅಧ್ಯಯನ ವರದಿಯನ್ನು ತಯಾರಿಸಿ ಅಕ್ಟೊಬರ್ ೨೦೧೯ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯ ಒಟ್ಟು ಅಂದಾಜು ಮೊತ್ತ ರೂ. ೨೪,೯೯೬.೭೧ ಕೋಟಿಗಳಾಗಿದ್ದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅನುಮೋದನೆ ನಿರೀಕ್ಷಿಸಲಾಗುತ್ತಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅನುಮೊದನೆ ದೊರೆತ ನಂತರ ಹತ್ತು ವರ್ಷಗಳ ಅವಧಿಯಲ್ಲಿ ಯೋಜನೆಗಳನ್ನು ಹಂತ ಹಂತವಾಗಿ ಅನಷ್ಠಾನಗೊಳಿಸಲು ಯೋಜಿಸಿದೆ.

            ರಾಜ್ಯ ಸರ್ಕಾರ ಸಲ್ಲಿಸಿದ್ದ CEPMIZ ಯೋಜನೆಯನ್ನು ಮಾನ್ಯ ಸರ್ವೊಚ್ಚ ನ್ಯಾಯಾಲಯವು ದಿನಾಂಕ 21.04.2022 ರಂದು ತತ್ವಶ: ಅನುಮೋದಿಸಿ ಪ್ರತಿ ಯೋಜನೆಯ ಅನುಮೋದನೆ ಹಾಗೂ ಅನುಷ್ಠಾನ ಉಸ್ತುವಾರಿಗಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧಿಶರಾದ ಶ್ರೀ. ಸುದರ್ಶನ ರೆಡ್ಡಿಯವರನ್ನು ಮೇಲುಸ್ತುವಾರಿ ಪ್ರಾಧಿಕಾರವಾಗಿ ನೇಮಕ ಮಾಡಿರುತ್ತದೆ.

                ಮಾನ್ಯ ಮೇಲುಸ್ತುವಾರಿ ಪ್ರಾಧಿಕಾರ ದಿನಾಂಕ 30.05.2022 ರಂದು ಅಧಿಕಾರ ಸ್ವೀಕರಿಸಿ  ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚಿನ ನವೀಕರಣ​ : 17-09-2022 02:57 PM ಅನುಮೋದಕರು: Karnataka Mining Environment Restoration Corporation


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080